ಮೈಸೂರಿನಲ್ಲಿ ಮಹೇಶ್ ಬಾಬು ನಿರ್ದೇಶನದ ನೂತನ ಚಿತ್ರ ಆರಂಭ
Posted date: 16 Wed, Nov 2016 – 10:15:50 AM

ಚಾಮುಂಡಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಪ್ರೇಂ ಮೈಸೂರು ಡಾ||ವೇಣುಗೋಪಾಲ್ ಹಾಗೂ ಗಂಡಸಿ ಮಂಜುನಾಥ್ ಅವರು ನಿರ್ಮಿಸುತ್ತಿರುವ ಹಾಗೂ ಮಹೇಶ್ ಬಾಬು ಅವರ ನಿರ್ದೇಶನದ ‘ಪ್ರೊಡಕ್ಷನ್ ನಂ ೧‘ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮೈಸೂರಿನ ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಶಿಕ್ಷಣ ಸಚಿವ ತನ್ವೀರ್ ಶೇಠ್ ಆರಂಭ ಫಲಕ ತೋರಿದರು. ಫ಼ಾದರ್ ಜಾರ್ಜ್ ದೀಪಕ್ ಕ್ಯಾಮೆರಾ ಚಾಲನೆ ಮಾಡಿದರು.
    ಮಹೇಶ್‌ಬಾಬು ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಚೇತನ್ ಹಾಗೂ ನಾಯಕಿಯಾಗಿ ಲತಾ ಹೆಗ್ಡೆ ಅಭಿನಯಿಸುತ್ತಿದ್ದಾರೆ. ಅಚ್ಯುತಕುಮಾರ್, ಅವಿನಾಶ್, ಸುಧಾ ಬೆಳವಾಡಿ, ರವಿಶಂಕರ್ ಗೌಡ, ರಾಬಿನ್ ಸಿಂಗ್, ಸಾಧುಕೋಕಿಲ, ಸುನಿಲ್, ಪ್ರಶಾಂತ್ ಸಿದ್ದಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಚೆನ್ನೈನ ವಿಘ್ನೇಶ್(ಜ್ಯೂಡೊ ಮಾಸ್ಟರ್) ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಮೈಸೂರು ಸುತ್ತಮುತ್ತ ನಲವತ್ತು ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ.
    ಜೈ ಆನಂದ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸಾಧುಕೋಕಿಲ ಅವರ ಪುತ್ರ ಸುರಾಜ್ ಮೊದಲ ಬಾರಿಗೆ ಸಂಗೀತ ನೀಡುತ್ತಿದ್ದಾರೆ. ಮುನಿರಾಜು ಅವರ ಸಂಕಲನ ಕೂಡ ಈ ಚಿತ್ರಕ್ಕಿದೆ.
ಅಜಯ್ ಪಿಕ್ಚರ‍್ಸ್ ಲಾಂಛನದಲ್ಲಿ ಎಂ.ಗೋವಿಂದು ಅವರು ನಿರ್ಮಿಸುತ್ತಿರುವ ‘ದೊಡ್ಮನೆ ಹುಡ್ಗ‘ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಪೂರ್ಣವಾಗಿದೆ. ಬೆಂಗಳೂರು, ಮೈಸೂರು, ಮಂಡ್ಯ ಮುಂತಾದ ಕಡೆ ೨೩ದಿನಗಳ ಚಿತ್ರೀಕರಣ ನಡೆದಿದೆ. ದ್ವಿತೀಯ ಹಂತದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ ಎಂದು ನಿರ್ದೇಶಕ ಸೂರಿ ತಿಳಿಸಿದ್ದಾರೆ.
     

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed